ಲಿಂಗಾಯತ ಮಠಗಳಿಂದ ಕಾಂಗ್ರೆಸ್‍ಗೆ ಬೆಂಬಲ: ಕಾಂಗ್ರೆಸ್ ಪಕ್ಷದಲ್ಲಿ ಹುಮ್ಮಸ್ಸು ವೃದ್ಧಿ!



ಲಿಂಗಾಯತ ಮಠಗಳಿಂದ ಕಾಂಗ್ರೆಸ್‍ಗೆ ಬೆಂಬಲ. ಸಿದ್ದರಾಮಯ್ಯ ನವರು ಲಿಂಗಾಯತರಿಗೆ ಅಲ್ಪ ಸಂಖ್ಯಾತರ ಸ್ಥಾನ-ಮಾನ ಕೊಡುವ ಕುರಿತು ಶಿಫಾರಸು ಮಾಡಿದ ಚಾಣಾಕ್ಷ ರಾಜಕೀಯ ನಡೆ ಫಲ ಕೊಟ್ಟಿದೆ. ರಾಜಕೀಯವಾಗಿ ನಿರ್ಣಾಯಕ ಪ್ರಭಾವ ಇರುವ ಲಿಂಗಾಯತ ಸಮಾಜದ ಬೆಂಬಲ ಪಡೆದಿರುವ ಸಿದ್ದರಾಮಯ್ಯ ಅವರು ಮೇಲುಗೈ ಸಾಧಿಸಿದಂತಾಗಿದೆ, ಇದರಿಂದ ಭಾ.ಜ.ಪಾ ದುರಿಣರು ವಿಚಲಿತರಾಗಿದ್ದಾರೆ. 

ಅಮಿತ್-ಶಾ ಅವರಿಗೆ ಪ್ರಭಲ ಲಿಂಗಾಯತ ಲಿಂಗಾಯತ ಮಠಗಳಲ್ಲೊಂದಾದ ಧಾರವಾಡದ ಮುರುಘಾಮಠವು ಪತ್ರ ಮುಖೇನ ಆಡಳಿತ ಪಕ್ಷ ಕಾಂಗ್ರೆಸ್ ವಿರುಧ್ಧ ಲಿಂಗಾಯತ ಸಮಾಜವನ್ನು ಒಗ್ಗೂಡುವಂತೆ ಮಾಡಿದ ಮನವಿ ತಿರಸ್ಕರಿಸಿ ಭಾರಿ ಮುಖ ಭಂಗ ಮಾಡಿದೆ.

"ಕರ್ನಾಟಕ ಸರ್ಕಾರವು ಲಿಂಗಾಯತರಿಗೆ ಅಲ್ಪ ಸಂಖ್ಯಾತರ ಸ್ಥಾನ-ಮಾನ ಕೊಡುವ ಕುರಿತು (ನ್ಯಾಶಿನಲ್ ಕಮಿಶನ್ ಫಾರ್ ಬ್ಯಾಕ್‍ವರ್ಡ ಕ್ಲಾಸ್) ಗೆ ಶಿಫಾರಸು ಮಾಡಿದ್ದು ಸರಿಯಾಗಿದೆ" -ಶಿವಮೂರ್ತಿ ಮುರುಘಾ ಶರಣರು ಅಮಿತ್ ಶಾ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ಲಿಂಗಾಯತರ ಈ ನಡೆ ಯಿಂದ ಭಾರತೀಯ ಜನತಾ ಪಕ್ಷಕ್ಕೆ ಹಿನ್ನಡೆ ಎನ್ನಬಹುದು. ಸ್ಥಳೀಯ ಭಾ.ಜ.ಪಾ ಲಿಂಗಾಯತ ಶಾಸಕರು ಹಾಗು ಧುರಿಣರು ಅಷ್ಟೊಂದು ಪ್ರಭಾವ ಬೀರದಿರುವದು ಪಕ್ಷಕ್ಕೆ ಹಿನ್ನಡೆಯುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಅಮಿತ್ ಶಾ ಅವರ ಗೇಮ್ ಪ್ಲ್ಯಾನ್ ಏನಿರಬಹುದು, ಕಾದು ನೋಡೋಣ! 

Bright Focuss
www.brightfocuss.com

Comments

Popular posts from this blog

GAANAYOGI SHIVAYOGI DR.PANDIT PUTTARAJA GAVAI

SHRI G. S. PATIL -MLA., Ron

G S Patil- Ron Constituency: A Politician rarely found with great qualities.