ಜಗತ್ತಿನ ಅತ್ಯಂತ ಬಲಿಷ್ಟ ಕ್ಷಿಪಣಿ -SpaceX
ಅಪೊಲೊ 11, ಮಾನವನನ್ನು ಚಂದಿರನಡೆಗೆ ಕರೆದೌಯ್ದ ಫ್ಲೋರಿಡಾ ಕನೆಡಿ ಸ್ಪೇಸ್ ಸೆಂಟರ್‍ನ ಲಾಂಚ್ ಪ್ಯಾಡ ನಿಂದ ಈಗ ಜಗತ್ತಿನಲ್ಲೇ ಬಲಿಷ್ಟ ವೆನ್ನುವ, ಮೊದಲಬಾರಿಗೆ ಮಂಗಳನ ಸಮೀಪಕ್ಕೆ ಕರೆದೊಯ್ಯುವ ಸಾಮಥ್ರ್ಯ ವಿರುವ ಖಾಸಗಿ ಕ್ಷಿಪಣಿಯನ್ನು ಅಂತರಿಕ್ಷಕ್ಕೆ ಉಡಾಯಿಸಿದರು, ಆ ನೆಗೆತದ ರಭಸ ಹೇಗಿತ್ತೆಂದರೆ ಒಂದು ದೊಡ್ಡ ಗುಡ್ಡದಷ್ಟು ಹೊಗೆ ಚಿಮ್ಮಿ, ರೌದ್ರ ರಮಣೀಯ
ವೆನ್ನುವ ಶಬ್ದ ಇಡೀ ಫ್ಲೋರಿಡಾವನ್ನು ಗಡ ಗಡನೆ ನಡುಗಿಸಿತ್ತು. ಆ ಅದ್ಭುತವನ್ನು ನೋಡಲುಬಂದ ಸಾವಿರಾರು ಜನರ ಕರಡತಾನಕ್ಕೆನೋ ಎನ್ನುವಂತೆ ಕ್ಷಿಪಣಿಯು ಹಿಂದೆಂದೂ ನೋಡಿರದ ರಭಸದಿಂದ ಅಂತರಿಕ್ಷೆಗೆ ಚಿಮ್ಮಿತು.
ಈ ಭೃಹತ್ ಕಾರ್ಯದಲ್ಲಿ ಹಿಂದೆಂದೂ ಕಂಡಿರದ ಮೋಟ್ಟ ಮೋದಲ ಬಾರಿಗೆ 27 ಎಂಜಿನ್ ಒಳಗೊಂಡ ಒಂದಕ್ಕೊಂದು ಜೊಡಿಸಿದ 3 ಬೂಸ್ಟರ್ ನಿಂದ ಕೂಡಿದ ಅದ್ಭುತ ಕ್ಷಿಪಣಿ. ಇನ್ನಂದು ವಿಷೇಷವೆಂದರೆ "ಸ್ಪೇಸ್‍ಎಕ್ಸ" ಸಂಸ್ಥೆಯ ಪ್ರಭಾವಿ ವಿಜ್ನಾನಿಗಳ ಸಾಲಲ್ಲಿ ನಿಲ್ಲುವ ಈಲಾನ್ ಮಸ್ಕ್ ಅವರು ತಮ್ಮ ಸ್ವಂತದ ಕೆಂಪು ಬಣ್ಣದ "ಟಸ್ಲಾ ರೋಡ್ಸ್ಟರ್" ವಿದ್ಯುತ್ ಚಾಲಿತ ಕಾರನ್ನು ಅಂತರಿಕ್ಷೆ ಮೇಲುಡುಗೆ ಧರಿಸಿದ ಗೊಂಬೆಯನ್ನು ಅಂತರಿಕ್ಷೆಗೆ ಕಳಿಸಿದ್ದು. ಈ ಬಲಿಷ್ಟ ಕ್ಷಿಪಣಿಯು ಅಮೆರಿಕ ಭದ್ರತಾ ಸಂಸ್ಥೆ ಪೆಂಟಗನ್‍ನ ಭದ್ರತಾ ಕ್ಷಿಪಣಿಗಳನ್ನು ಅಂತರಿಕ್ಷೆಗೆ ಕೊಂಡೊಯ್ಯಲು ಅನುಕೂಲಕರ ಎಂಬ ಮಾತಿದೆ.
ನಾಸಾ ಸಂಸ್ಥೆಯು ಅಂತರಿಕ್ಷ ಯಾನ ನೌಕೆ ಪ್ರಾಜೆಕ್ಟನ್ನು 2011ರಲ್ಲಿ ಮೊಟಕುಗೊಳಿಸದರ ಪರಿಣಾಮ ಸ್ಪೇಸ್‍ಎಕ್ಸನ "ಫಾಲ್ಕನ್ ಹೆವಿ" ಅಂತರಿಕ್ಷೆಯಲ್ಲಿ ಹೆಚ್ಚಿನ ದೂರದ ಯಾನದ ಕನಸನ್ನು ಇನ್ನೂ ಹಸಿರಾಗಿಸಿದೆ. ಇದೇರೀತಿ ಶಕ್ತಿಶಾಲಿ ಕ್ಷಿಪಣಿ ತಯಾರಿಕೆಗೆ ನಾ ಮುಂದು ನೀ ಮುಂದು ಎಂದು ಹಲವು ಕಂಪನಿಗಳು ತುರುಸಿನಿಂದ ಕಾರ್ಯರೂಪದಲ್ಲಿವೆ.
-ಬ್ರೈಟ್ ಫೋಕಸ್ (Bright Focuss)
Comments
Post a Comment