ನೀವು ಒಬ್ಬ ಮನೋ ವಿಕೃತ ವ್ಯಕ್ತಿಯೊಂದಿಗೆ ಜೀವಿಸುತ್ತಿದ್ದೀರಿ-ಇಲ್ಲಿವೆ ಅವರ ಲಕ್ಷಣಗಳು:


ನೀವು ಒಬ್ಬ ಮನೋ ವಿಕೃತ ವ್ಯಕ್ತಿಯೊಂದಿಗೆ ಜೀವಿಸುತ್ತಿದ್ದೀರಿ.

ಇಲ್ಲಿವೆ ಅವರ ಲಕ್ಷಣಗಳು:

1. ತಾನೇ ಎಲ್ಲ, ತನ್ನಿಂದಲೇ ಹಾಗೂ ತಾನು ಮಾತ್ರ
ಇದನ್ನು ಸಾಧಿಸಲು ಇವರು ಏನುಮಾಡಲೂ ಹಿಂದೆ ಸರಿಯುವದಿಲ್ಲ. ತನ್ನಿಂದಲೇ ಎಲ್ಲ ಎಂಬುದನ್ನು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಬೇರೆಯವರ  ಏಳ್ಗೆ ಸಹಿಸುವುದಿಲ್ಲ. ಆದ್ರೆ ಅದು ತನ್ನಿಂದ ಅವರಿಗೆ ಸಿಕ್ಕಿದ್ದರೆ ಊರೆಲ್ಲ ಹೇಳಿಕೊಡು ತಿರುಗುವ ವಿಲಕ್ಷಣ ಜಾಯಮಾನ. ನಿಮ್ಮೊಂದಿಗೆ ಇಂಥವರಿದ್ದರೆ  ತುಂಬಾ ಹುಶಾರಾಗಿರಿ.

2. ಹುಟ್ಟಿನಿಂದಲೇ ಮಹಾ ಸುಳ್ಳುಗಾರರು
ತಮ್ಮದನ್ನು ಸಾಧಿಸಲು ಸುಳ್ಳಿನ ಸರಮಾಲೆಯನ್ನೇ ಹೆಣೆದು ಭ್ರಮಾಲೋಕದಲ್ಲಿ ವಿಹರಿಸಿವ ವಿಕೃತಿ ಇವರದು. ನಿಮ್ಮನ್ನು ಭ್ರಮಾ ಲೋಕಕ್ಕೆ ತಳ್ಳಿ ವಿಚಿತ್ರ ವಿಕೃತ ಸುಖ ಅನುಭವಿಸುವ ಮಾನಸಿಕ ರೋಗಿಗಳು.


3. ತಮ್ಮದನ್ನು ಸಾಧಿಸಲು ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ.
ತಮಗೆ ಬೇಡವಾದ ವಿಷಯವಾದರೂ ಬೇರೆಯವರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಎಲ್ಲವನ್ನು ತಿಳಿದುಕೊಂಡಿರುತ್ತಾರೆ. ಅದರಲ್ಲೇ ವಿಚಿತ್ರ ಸುಖ ಕಾಣುವ ಇವರು ಮೇಲು ನೋಟಕ್ಕೆ ತುಂಬಾ ಮುಗ್ಧರಂತೆ ವರ್ತಿಸುತ್ತಾರೆ, ಹಳ್ಳಕ್ಕೆ ಬಿದ್ದರೆ ಅವರ ವಿಕೃತಿ ನಿಮ್ಮ ಇಡೀ ಜೀವನವನ್ನೇ ಡೋಲಾಯವಾನ ಮಾಡಿ ವಿಚಿತ್ರ ಸುಖ ಕಾಣುವ ಮನೋ ರೋಗಿಗಳು.

4.ತುಂಬಾ ಬೇಜವಾಬ್ದಾರರು
ಕೆಲವು ವಿಷಯ ಗಳಲ್ಲಿ ತುಂಬಾ ಬೇಜವಾಬ್ದಾರಿತನ ತೋರುತ್ತಾರೆ.ವಿಕೃತ ವ್ಯಕ್ತಿಯನ್ನು ಕಂಡುಹಿಡಿಯಲು ಅವರಿಗೆ ಏನಾದರೂ ಜವಾಬ್ದಾರಿ ಕೊಟ್ಟು ನೋಡಿ ನುಣುಚಿಕೊಳ್ಳಲು ಎಲ್ಲದಾರಿಗಳನ್ನು ಹುಡುಕಿ, ನೀವೇ ತಪ್ಪುಗಾರರು ಎಂದು ನಂಬಿಸಿಬಿಡುವ ಚಾಣಾಕ್ಷತೆ ಅವರಿಗೆ ಕರಗತ.

5. ಯಾವಾಗಲೂ ಜನ ತಮ್ಮನ್ನೇ ಹೊಗಳ ಬೇಕೆಂದು ಬಯಸುವವರು.
ಹೊಗಳು ಭಟ್ಟರು, ಬೇರೆಯವರನ್ನು ಹೊಗಳಿದರೆ ಹುಚ್ಚರಂತೆ ಆಡುತ್ತಾರೆ. ತಮಗೇ ಎಲ್ಲ ಅಟ್ಟೆನ್ಶನ್ ಸಿಗಬೇಕೆಂಬ ವಿಕೃತಿ ಇವರಲ್ಲಿ ಸದಾ ಇರುತ್ತದೆ.


6. ತುಂಬಾ ಬೇಗನೆ ಭಾವಾದ್ವೇಷಕ್ಕೆ ಒಳಗಾಗಿ ಹಿಂಸಾರೂಪಕ್ಕೆ ತಿರುಗುತ್ತಾರೆ. ಕ್ಷಣಮಾತ್ರದಲ್ಲಿ ಇವರು ಹಿಂಸಾರೂಪ ತಾಳಿಬಿಡುತ್ತಾರೆ, ಮಕ್ಕಳು ಮರಿಯನ್ನದೆ ಹಿಂಸಿಸುತ್ತಾರೆ. ಹೀಗಿದ್ದರೆ ಇವರು ವಿಕೃತ ಮನಸ್ಸಿನವರು ಎಂದು ತಿಳಿದುಕೊಳ್ಳಿ.

7. ಬೇರೆಯವರನ್ನು ಕೀಳುಮಟ್ಟದಲ್ಲಿ ಕಾಣುವ ಮತ್ತು ಬೇರೆಯವರನ್ನು ಕೀಳಾಗಿ ನಡೆಸಿಕೊಳ್ಳುವ ವಿಕೃತ ಹಂಬಲಿಕೆ. 


8.ತೋರಿಕೆಗೆ ತುಂಬಾ 
ಮುಗ್ಧರಂತೆ ಆಡುವ ಹಾಗೂ ಒಳಗೊಳಗೇ ದ್ವೇಷ ಸಾಧಿಸುವ ವಿಕೃತ ಮನಸ್ಸಿನವರು.
ನಿಮ್ಮ ಮನಃ ಶಾಂತಿಯನ್ನು ಹಾಳುಮಾಡುವ ಚಾಂಡಾಲರಾಗಿರುತ್ತಾರೆ. 

ಇಂಥವರು ನಿಮ್ಮ ಹತ್ತಿರ ಸುಳಿದರೆ ದೂರವಿರಿ.

ಕ್ರಪೆ : ಇಂಡಿಯಾ ಟೈಮ್ಸ್



Comments

Popular posts from this blog

GAANAYOGI SHIVAYOGI DR.PANDIT PUTTARAJA GAVAI

SHRI G. S. PATIL -MLA., Ron

G S Patil- Ron Constituency: A Politician rarely found with great qualities.