ಯಾರಿಗೆ ನಮ್ಮ ಮತ?
ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಯಶಸ್ವಿ ಪ್ರಜಾ ಪ್ರಭುತ್ವ ದೇಶ ಭಾರತ (India) ಎಂದೇ ಖ್ಯಾತಿ ಹೊಂದಿರುವುದು ನಮ್ಮ ಹೆಮ್ಮೆ. ಇಲ್ಲಿ ಮತದಾರನೆ ಮಹಾರಾಜ ( ಸಂವಿಧಾನದಲ್ಲಿ ಇರುವಂತೆ), ರಾಜಕಾರಣಿಗಳೇ ಸೇವಕರು. ಜನರಿಂದ, ಜನರಿಗೋಸ್ಕರ ಇರುವ ವ್ಯವಸ್ಥೆಯಲ್ಲಿ ಮತದಾರನ ಪಾತ್ರ ಬಹು ಮುಖ್ಯ.
ನಮ್ಮದೇಶದಲ್ಲಿ ಇರುವ ಐದು ವರ್ಷಗಳ ಆಡಳಿತ ವ್ಯವಸ್ಥೆ ಹಾಗೂ ಮತದಾನ ಪ್ರಕ್ರಿಯೆ ವಿಶಾಲವಾದುದು. ನೂರಾಇಪ್ಪತ್ತೈದು ಕೋಟಿ ಜನರಿರುವ ದೊಡ್ಡ ದೇಶ ಭಾರತ. ಇಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆ ಅಗಾಧ ಹಾಗೂ ಕ್ಲಿಷ್ಟ. ರಾಜಕಾರಣಿಗಳು ಜನರನ್ನ ಪ್ರಭಾವಿತರನ್ನಾಗಿಸಿ ಓಟು ಗಿಟ್ಟಿಸಿಕೊಳ್ಳುವದು ರೂಢಿ, ಇದರಲ್ಲಿ ವಾಮ ಮಾರ್ಗಗಳೇ ಹೆಚ್ಚು.
ಸುಸಂಸ್ಕೃತ, ಜನ ಪ್ರೇಮಿ ರಾಜಕಾರಣಿಗೆ ಮತ:
ಯಾರಿಗೆ ಮತಚಲಾಸಿದರೆ ಒಳಿತು? ಈ ಪ್ರಶ್ನೆ ಪ್ರಜ್ಞಾವಂತರಿಗೆ ಅಷ್ಟೆಅಲ್ಲದೆ ಸಾಮಾನ್ಯ ಜನರಿಗೂ ಸಹ ಕಾಡುವ ಪ್ರಶ್ನೆ. ಎಲ್ಲ ರಾಜಕಾರಣಿಗಳು ಆಡಂಬರದ ಪ್ರಚಾರ, ಭರವಸೆಗಳು ಮತ್ತು ಜನರಿಗೆ ಆಮಿಷೆ ತೋರಿಸಿ ಮತ ಗಿಟ್ಟಿಸಿಕೊಳ್ಳುತ್ತಾರೆ. ಎಲ್ಲ ರಾಜಕಾರಣಿಗಳು ಒಂದೇ ತರಹ ಇರುವರು ಎಂಬ ಅಭಿಪ್ರಾಯ ಜನರಲ್ಲಿ ಗೊಂದಲ ಸೃಷ್ಟಿಸುವುದು ಸಹಜ. ಇಂಥ ಸಮಯದಲ್ಲಿ ಸಹಜ ಪ್ರಶ್ನೆ ಯಾರಿಗೆ ಮತ ಚಲಾಸಿದರೆ ಒಳಿತು ಎಂಬದು.
ನಮ್ಮ ಅಭಿಪ್ರಾಯದಲ್ಲಿ ಜನರು ಪಕ್ಷಗಳನ್ನ ನೋಡದೆ ವ್ಯಕ್ತಿಯ ವೈಕ್ತಿಕ ಸ್ವಭಾವ ಮತ್ತು ವರ್ಚಸ್ಸನ್ನು ಗಮನಿಸಿ ಮತಾಚಲಾಸುವುದು ಬಹು ಮುಖ್ಯ. ವ್ಯಕ್ತಿಯ ಜನಸ್ಪಂದನೆ, ಸಮಾಜದ ಬಗೆಗಿನ ಕಾಳಜಿ, ಜನರನ್ನು ಕಾಣುವ ಹಾಗೂ ಸ್ಪಂದಿಸುವ ಬಗೆ ಇವೆಲ್ಲವೂ ಆ ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸುತ್ತವೆ, ಪೂರಕವಾಗಿ ಕ್ಷೇತ್ರದಲ್ಲಿ ಕೆಲಸಗಳಾಗುತ್ತವೆ. ಪಕ್ಷವನ್ನು ನೋಡಿ ಅಸಭ್ಯ, ಅಸಂಸ್ಕೃತ ಹಾಗೂ ದುರಹಂಕಾರಿ ರಾಜಕಾರಣಿಗಳನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಯೂ ಆಗದು ಜನರ ಅಭಿವೃದ್ಧಿಯೂ ಆಗದು.
ಸಜ್ಜನ ಹಾಗೂ ಸುಸಂಕೃತ ರಾಜಕಾರಣಿ, ರೋಣದ ಶಾಸಕರಾದ
ಶ್ರೀ ಜಿ. ಎಸ್ ಪಾಟೀಲ (G.S. Patil):
ರಾಜಕಾರಣದಲ್ಲಿ ಅಪವಾದವೆಂಬಂತೆ ಕೆಲವು ರಾಜಕಾರಣಿಗಳು ನಮ್ಮ ಎದುರಲ್ಲಿ ಇದ್ದರು ಹಾಗೂ ಇದ್ದಾರೆ. ಅಂಥವರ ಸಾಲಲ್ಲಿ ನಿಲ್ಲುವ ರಾಜಕಾರಣಿ ಶ್ರೀ ಜಿ. ಎಸ್. ಪಾಟೀಲ. ಸದಾ ಜನಪರ ಕಾಳಜಿ ಹಾಗೂ ಜನರ ಮದ್ಯದಲ್ಲಿಯೇ ಇರುವ ಜನಾನುರಾಗಿ. ಸುಸಂಸ್ಕೃತ ಮನೆತನದಲ್ಲಿ, ಉನ್ನತ ವ್ಯಕ್ತಿತ್ವ ರೂಢಿಸಿಕೊಂಡು ಜನಸೇವೆ ಮಾಡುತ್ತಾ ಬಂದಿರುವ ಇವರು ಅಜಾತಶತ್ರು. ಎಲ್ಲರನ್ನೂ ಪ್ರೀತಿಯಿಂದ ಕಾಣುವ ಉನ್ನತವ್ಯಕ್ತಿತ್ವ. ಗಜೇಂದ್ರಗಡ ಒಳಗೊಂಡ ರೋಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಬಗೆಗೆ ಅಪಾರ ಕಾಳಜಿ ಹೊಂದಿರುವ ಇವರು ಕಳೆದ ಐದು ವರ್ಷಗಳಲ್ಲಿ ಕೈಕೊಂಡ ಜನಪರ, ರೈತಪರಅಭಿವೃದ್ಧಿ ಕಾರ್ಯಗಳು ಜನ ಜನಿತ ಹಾಗೂ ಪ್ರಶಂಸನೀಯ. ಇವರ ಸರಳ, ಸಜ್ಜನ ಹಾಗೂ ಅಭಿವೃದ್ಧಿಪರ ವ್ಯಕ್ತಿತ್ವ ಜನಮದಲ್ಲಿ ಅಚ್ಚಳಿಯದಂತೆ ಉಳಿದಿದೆ. ಕ್ಷೇತ್ರದ ಜನತೆಯ ಪ್ರಕಾರ, 2018 ರಲ್ಲಿ ನಡೆಯುವ ಚುನಾವಣೆಯಲ್ಲಿ ಜನ ಇವರ ಕೈಯನ್ನೇ ಹಿಡಿಯುತ್ತಾರೆ ಎಂಬುದು ಅಂಬೋಣ.
Bright Focuss
brightfocuss.com@gmail.com
Comments
Post a Comment