ಅಂತರ್ಜಲ ಮತ್ತು ಪರಿಸರ ರಕ್ಷಣೆಯಲ್ಲಿ ರಾಜಕಾರಣಿಗಳ ಪಾತ್ರ



ಮಾನವನ ಅತಿ ಆಸೆಯಿಂದ ಯಿಂದು ಪರಿಸರ ಕಲ್ಮಶವಾಗಿ ವಿಷಕಾರುತ್ತಿದೆ. ನಿಸರ್ಗ ಕೊಟ್ಟ ಸಂಪತ್ತನ್ನು ನಾವು ಉಪಯೋಗಿಸುವುದರೊಂದಿಗೆ ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯ. ಆದರೆ ಮಾನವ ಇಂದು ನಿಸರ್ಗದ ಮೇಲೆ ತೊರುತ್ತಿರುವ ಅಸಡ್ಡೆ, ತನ್ನ ಕಾಲ ಮೇಲೆ ತಾನೆ ಕಲ್ಲು ಹಾಕಿಕೊಂಡಂತಿದೆ. ಪರಿಸರ ಶೊಷಣೆ ತರವಲ್ಲ, ಇದು ಮುಂದಿನ ಪೀಳಿಗೆಗೆ ಮಾರಕವಾಗಲಿದೆ, ಭೂಮಿ ಬದುಕಲು ದುಸ್ತರವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ರಾಜಕಾರಣಿಗಳ ಹಾಗು ಸರಕಾರಿ ಅಧಿಕಾರಿಗಳ ಪಾತ್ರ ಬಹುಮುಖ್ಯ. ಕೇಂದ್ರ ಹಾಗು ರಾಜ್ಯ ಸರಕಾರಗಳು ಈಗಾಗಲೆ ಹಲವಾರು ಪರಿಸರ ಸ್ನೇಹಿ ಯೋಜನೆಗಳನ್ನು ಹಾಕಿಕೊಂಡಿದ್ದು ಅನುಷ್ಠಾನ ಸರಿಯಾಗಿ ಆಗಬೇಕಿದೆ. ಸರಕಾರದ ಈ ಪರಿಸರ ಸ್ನೇಹಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಬಹುಮುಖ್ಯ ಹಾಗು ಆದ್ಯ ಕರ್ತವ್ಯವಾಗಿರುತ್ತದೆ. 

ಹಸಿರು ರಕ್ಷಣೆ ಹಾಗು ಹಸಿರು ಬೆಳೆಸುವದು:

ಕಾಡುಗಳ ಸಂರಕ್ಷಣೆ ಹಾಗು ಯುವ ಪೀಳಿಗೆಗೆ ಅದರ ಅರಿವು ಬಹುಮುಖ್ಯ. ಈ ಶಿಕ್ಷಣ ಶಾಲೆಗಳಿಂದಲೆ ಹಾಗು ಚಿಕ್ಕ ವಯಸ್ಸಿನಲ್ಲೆ ಮಕ್ಕಳಲ್ಲಿ ಅರಿವುಮೂಡಿಸುವ ಕೆಲಸವಾಗಬೇಕು. ಪರಿಸರ ಪ್ರಜ್ಞೆ ಹಾಗು ಪ್ರೇಮ ಯುವಪೀಳಿಗೆಯಲ್ಲಿ ಮೈಗೂಡಬೇಕು. ಊರು, ಕೇರಿ, ಅಂಗಳ, ಶಾಲೆ, ಕಾಲೇಜುಗಳಲ್ಲಿ ಹಸಿರು ಬೆಳೆಸುವ ಕಾರ್ಯ ನಡೆಯಬೇಕು. ಕಾಡುಗಳನ್ನು ಹಾಗು ವನ್ಯ ಪ್ರಾಣಿಗಳನ್ನು ರಕ್ಷಿಸುವುದರ ಮಹತ್ವ ಯುವಪೀಳಿಗೆಗೆ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ರೋಣದ ಶಾಸಕರು ಶ್ರೀ ಜಿ. ಎಸ್. ಪಾಟೀಲರು (Shri G. S. Patil)) ರೋಣ(Ron) ವಿಧಾನಸಭಾ ಕ್ಷೇತ್ರದಲ್ಲಿ ಕೈಕೊಂಡಕಾರ್ಯ ಶ್ಲಾಘನೀಯ. 

ಜಲ ಸಂಪನ್ಮೂಲ ರಕ್ಷಣೆ ಹಾಗು ಅಭಿವೃದ್ಧಿ:

ಭೂಮಿಯ ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದೆ, ಮುಂದಿನ ದಿನಗಳಲ್ಲಿ ಈ ದುಸ್ಥಿತಿ ಇನ್ನೂ ಹದಗೆಡುವ ಪರಿಸ್ಥಿತಿ ಬರುವುದನ್ನು ನಾವು ತಪ್ಪಿಸಬಹುದು. ಕೊಳವೆಭಾವಿ, ಹಳ್ಳ-ಕೊಳ್ಳಗಳು ಬತ್ತಿ ಹೋಗುವ ಅಪಾಯವನ್ನು ನಾವು ತಡೆಯ ಬಹುದು. ಮಳೆಯ ನೀರು ಪೋಲಾಗದಂತೆ ಕಾಯ್ದು ಕೊಳ್ಳುವ ಮಳೆ ನೀರು ಕೊಯ್ಲುಮಾಡುವುದು, ಹಳ್ಳಿ, ಪಟ್ಟಣ, ಗದ್ದೆ, ತೋಟ, ಮನೆ ಅಂಗಳದಲ್ಲಿ ಇಂಗು-ಗುಂಡಿಗಳನ್ನು ನಿರ್ಮಿಸಿವುದು, ಕೆರೆ, ಕೊಳ್ಳ, ಭವಿ ಗಳನ್ನು ಸಂರಕ್ಷಿಸುವುದು ಹಾಗು ಅಭಿವೃದ್ಧಿ ಪಡಿಸುವುದು, ರಾಜ್ಯ ಹಾಗು ಕೇಂದ್ರ ಸರಕಾರಗಳ ಹಲವಾರು ಪರಿಸರ ಸ್ನೇಹಿ ಯೋಜನೆಗಳನ್ನು ನಮ್ಮ ಜನಪ್ರತಿನಿಧಿಗಳು ಜನರಿಗೆ ತಲುಪಿಸಿ ಅಭಿವೃದ್ಧಿ ಪಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಶ್ರೀ ಜಿ. ಎಸ್. ಪಾಟೀಲರು(Shri G. S. Patil) ಗದಗ (Gadag) ಜಿಲ್ಲೆ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕೆರೆ, ಕೊಳ್ಳ, ಚೆಕ್ ಡ್ಯಾಂ, ಇಂಗು-ಗುಂಡಿ ಗಳನ್ನು ಅಭಿವೃದ್ಧಿ ಪಡಿಸಿ ಜನತೆಗೆ ಅನುಕೂಲ ಮಾಡಿದ್ದಾರೆ. ಶ್ರೀಯುತರ ಜಲ ರಕ್ಷಣೆ ಹಾಗು ಪರಿಸರ ಪ್ರೀತಿ ಶ್ಲಾಘನೀಯ. 

ಶ್ರೀ ಜಿ. ಎಸ್. ಪಾಟೀಲರು ರೋಣ ವಿಧಾನಸಭಾ ಕ್ಷೇತ್ರದಲ್ಲಿ ಕೈಕೊಂಡ ಪರಿಸರ ಸ್ನೇಹಿ ಕಾರ್ಯಗಳು:

ಮಲಪ್ರಭಾ ಬಲದಂಡೆ ಕಾಲುವೆಯ ಚೊಳಚಗುಡ್ಡ ಬ್ಯಾರೇಜ್ ನಿಂದ ರೋಣ ತಾಲುಕಿನ 22 ಹಳ್ಳಿಗಳಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗಿದೆ.
ಮಲಪ್ರಭಾ ಬಲದಂಡೆ ಕಾಲುವೆಯ ಅಧುನಿಕರಣ
ರೋಣ ತಾಲುಕು ಲೆಕ್ಕಲಕಟ್ಟಿ ಇಂಗು-ಕೆರೆ ನಿರ್ಮಿಸಲು ಅಂದಾಜು ಮೊತ್ತ ರೂ. 400 ಲಕ್ಷ ಗಳ ಕಾಮಗಾರಿಗೆ ಅಡಿಗಲ್ಲು 
6 ಸ್ಥಳಗಳಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಅಂದಾಜು ಮೊತ್ತ ರೂ. 220 ಲಕ್ಷ ಗಳ ಕಾಮಗಾರಿಗೆ ಅಡಿಗಲ್ಲು
ರೋಣ ತಾಲುಕು ವದೇಗಲ್ ಗ್ರಾಮದಲ್ಲಿ ಹೋಸ ಕೆರೆ ನಿರ್ಮಿಸಲು ಅಂದಾಜು ಮೊತ್ತ ರೂ. 150 ಲಕ್ಷ ಗಳ ಕಾಮಗಾರಿಗೆ ಅಡಿಗಲ್ಲು
ರೋಣ ಶಹರದ ಮದ್ಯ ಭಾಗದಲ್ಲಿ ಕೆರೆ ಅಭಿವೃದ್ಧಿಗೆ ಅಂದಾಜು ಮೊತ್ತ ರೂ. 200 ಲಕ್ಷ ಗಳ ಮಂಜೂರಾತಿ ಪಡೆಯಲಾಗಿದೆ
ದಾಖಲೆ ಸಂಖ್ಯಯಲ್ಲಿ 5000 ಕ್ಕೂ ಹೆಚ್ಚು ರೈತರ ಕೃಷಿ ಚಟುವಟಿಕೆಗಳಿಗಾಗಿ ಸಣ್ಣ ಸಣ್ಣ ಕೆರೆಗಳ ನಿರ್ಮಾಣ.


ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಹಲವಾರು ಪರಿಸರ ಸ್ನೇಹಿ ಕೆಲಸಗಳಾಗಲಿ, ಕಾಡು, ನೀರು, ಪರಿಸರವನ್ನು ಕಾಪಾಡಿಕೊಳ್ಳೋಣ. ಮುಂದಿನ ಪೀಳಿಗೆಗೆ ಸುಂದರ, ಆರೋಗ್ಯವಂತ ಸಮಾಜವನ್ನು ನೀಡೋಣ.




Brightfocuss.com@gmail.com


Comments

Popular posts from this blog

GAANAYOGI SHIVAYOGI DR.PANDIT PUTTARAJA GAVAI

SHRI G. S. PATIL -MLA., Ron

G S Patil- Ron Constituency: A Politician rarely found with great qualities.