Posts

Showing posts from January, 2018

ಯಾರಿಗೆ ನಮ್ಮ ಮತ?

Image
ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಯಶಸ್ವಿ ಪ್ರಜಾ ಪ್ರಭುತ್ವ ದೇಶ  ಭಾರತ ( India )  ಎಂದೇ ಖ್ಯಾತಿ ಹೊಂದಿರುವುದು ನಮ್ಮ ಹೆಮ್ಮೆ. ಇಲ್ಲಿ ಮತದಾರನೆ ಮಹಾರಾಜ ( ಸಂವಿಧಾನದಲ್ಲಿ ಇರುವಂತೆ), ರಾಜಕಾರಣಿಗಳೇ ಸೇವಕರು. ಜನರಿಂದ, ಜನರಿಗೋಸ್ಕರ ಇರುವ ವ್ಯವಸ್ಥೆಯಲ್ಲಿ ಮತದಾರನ ಪಾತ್ರ ಬಹು ಮುಖ್ಯ. ನಮ್ಮದೇಶದಲ್ಲಿ ಇರುವ ಐದು ವರ್ಷಗಳ ಆಡಳಿತ ವ್ಯವಸ್ಥೆ ಹಾಗೂ ಮತದಾನ ಪ್ರಕ್ರಿಯೆ ವಿಶಾಲವಾದುದು. ನೂರಾಇಪ್ಪತ್ತೈದು ಕೋಟಿ ಜನರಿರುವ ದೊಡ್ಡ ದೇಶ ಭಾರತ. ಇಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆ ಅಗಾಧ ಹಾಗೂ ಕ್ಲಿಷ್ಟ. ರಾಜಕಾರಣಿಗಳು ಜನರನ್ನ ಪ್ರಭಾವಿತರನ್ನಾಗಿಸಿ ಓಟು ಗಿಟ್ಟಿಸಿಕೊಳ್ಳುವದು ರೂಢಿ, ಇದರಲ್ಲಿ ವಾಮ ಮಾರ್ಗಗಳೇ ಹೆಚ್ಚು.  ಸುಸಂಸ್ಕೃತ, ಜನ ಪ್ರೇಮಿ ರಾಜಕಾರಣಿಗೆ ಮತ: ಯಾರಿಗೆ ಮತಚಲಾಸಿದರೆ ಒಳಿತು? ಈ ಪ್ರಶ್ನೆ ಪ್ರಜ್ಞಾವಂತರಿಗೆ ಅಷ್ಟೆಅಲ್ಲದೆ ಸಾಮಾನ್ಯ ಜನರಿಗೂ ಸಹ ಕಾಡುವ ಪ್ರಶ್ನೆ. ಎಲ್ಲ ರಾಜಕಾರಣಿಗಳು ಆಡಂಬರದ ಪ್ರಚಾರ, ಭರವಸೆಗಳು ಮತ್ತು ಜನರಿಗೆ ಆಮಿಷೆ ತೋರಿಸಿ ಮತ ಗಿಟ್ಟಿಸಿಕೊಳ್ಳುತ್ತಾರೆ. ಎಲ್ಲ ರಾಜಕಾರಣಿಗಳು ಒಂದೇ ತರಹ ಇರುವರು ಎಂಬ ಅಭಿಪ್ರಾಯ ಜನರಲ್ಲಿ ಗೊಂದಲ ಸೃಷ್ಟಿಸುವುದು ಸಹಜ. ಇಂಥ ಸಮಯದಲ್ಲಿ ಸಹಜ ಪ್ರಶ್ನೆ ಯಾರಿಗೆ ಮತ ಚಲಾಸಿದರೆ ಒಳಿತು ಎಂಬದು.  ನಮ್ಮ ಅಭಿಪ್ರಾಯದಲ್ಲಿ ಜನರು ಪಕ್ಷಗಳನ್ನ ನೋಡದೆ ವ್ಯಕ್ತಿಯ ವೈಕ್ತಿಕ ಸ್ವಭಾವ ಮ...