ನೀವು ಒಬ್ಬ ಮನೋ ವಿಕೃತ ವ್ಯಕ್ತಿಯೊಂದಿಗೆ ಜೀವಿಸುತ್ತಿದ್ದೀರಿ-ಇಲ್ಲಿವೆ ಅವರ ಲಕ್ಷಣಗಳು:

ನೀವು ಒಬ್ಬ ಮನೋ ವಿಕೃತ ವ್ಯಕ್ತಿಯೊಂದಿಗೆ ಜೀವಿಸುತ್ತಿದ್ದೀರಿ. ಇಲ್ಲಿವೆ ಅವರ ಲಕ್ಷಣಗಳು: 1. ತಾನೇ ಎಲ್ಲ, ತನ್ನಿಂದಲೇ ಹಾಗೂ ತಾನು ಮಾತ್ರ ಇದನ್ನು ಸಾಧಿಸಲು ಇವರು ಏನುಮಾಡಲೂ ಹಿಂದೆ ಸರಿಯುವದಿಲ್ಲ. ತನ್ನಿಂದಲೇ ಎಲ್ಲ ಎಂಬುದನ್ನು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಬೇರೆಯವರ ಏಳ್ಗೆ ಸಹಿಸುವುದಿಲ್ಲ. ಆದ್ರೆ ಅದು ತನ್ನಿಂದ ಅವರಿಗೆ ಸಿಕ್ಕಿದ್ದರೆ ಊರೆಲ್ಲ ಹೇಳಿಕೊಡು ತಿರುಗುವ ವಿಲಕ್ಷಣ ಜಾಯಮಾನ. ನಿಮ್ಮೊಂದಿಗೆ ಇಂಥವರಿದ್ದ ರೆ ತುಂಬಾ ಹುಶಾರಾಗಿರಿ. 2. ಹುಟ್ಟಿನಿಂದಲೇ ಮಹಾ ಸುಳ್ಳುಗಾರರು ತಮ್ಮದನ್ನು ಸಾಧಿಸಲು ಸುಳ್ಳಿನ ಸರಮಾಲೆಯನ್ನೇ ಹೆಣೆದು ಭ್ರಮಾಲೋಕದಲ್ಲಿ ವಿಹರಿಸಿವ ವಿಕೃತಿ ಇವರದು. ನಿಮ್ಮನ್ನು ಭ್ರಮಾ ಲೋಕಕ್ಕೆ ತಳ್ಳಿ ವಿಚಿತ್ರ ವಿಕೃತ ಸುಖ ಅನುಭವಿಸುವ ಮಾನಸಿಕ ರೋಗಿಗಳು. 3. ತಮ್ಮದನ್ನು ಸಾಧಿಸಲು ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ. ತಮಗೆ ಬೇಡವಾದ ವಿಷಯವಾದರೂ ಬೇರೆಯವರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಎಲ್ಲವನ್ನು ತಿಳಿದುಕೊಂಡಿರುತ್ತಾರೆ. ಅದರಲ್ಲೇ ವಿಚಿತ್ರ ಸುಖ ಕಾಣುವ ಇವರು ಮೇಲು ನೋಟಕ್ಕೆ ತುಂಬಾ ಮುಗ್ಧರಂತೆ ವರ್ತಿಸುತ್ತಾರೆ, ಹಳ್ಳಕ್ಕೆ ಬಿದ್ದರೆ ಅವರ ವಿಕೃತಿ ನಿಮ್ಮ ಇಡೀ ಜೀವನವನ್ನೇ ಡೋಲಾಯವಾನ ಮಾಡಿ ವಿಚಿತ್ರ ಸುಖ ಕಾಣುವ ಮನೋ ರೋಗಿಗಳು. 4.ತುಂಬಾ ಬೇಜವಾಬ್ದಾರರು ಕೆಲವು ವಿಷಯ ಗಳಲ್ಲಿ ತುಂಬಾ ಬೇಜವಾಬ್ದಾರಿತನ ತೋರುತ್ತ...